
ಮಾತು ಮತ್ತು ಮೌನಗಳ ನಡುವಿನ ಅತೀ ಸೂಕ್ಷ್ಮದ ಹೆಸರೇನು???
ಈ ಪ್ರಶ್ನೆಯನ್ನ ಸುಮಾರು ಸಾರಿ ಕೇಳಿ ಶ್ರೀಸೂಕ್ತಳ ಪ್ರಾಣಹರಣ ಮಾಡಿಬಿಟ್ಟಿದ್ದೆ. ಅವಳಲ್ಲಿ ಉತ್ತರವಿರಲಿಲ್ಲವೆಂದೆನಿಲ್ಲ ಹೇಳುವುದಕ್ಕೆ ಯಾವುದೋ ತಡೆ ಅವಳಿಗೆ. ಮೊದಲಿನಿಂದಲೂ ಅಷ್ಟೇ, ನಾ ಕೇಳುವ ಪ್ರಶ್ನೆಗಳಿಗೆ ಸೂಕ್ತಳದು ಒಂದು ಮುಗುಳ್ನಗು ಮಾತ್ರ ಉತ್ತರ. ನಾ ಪ್ರಶ್ನೆ ಮರೆತ ದಿನ ಅವಳ ನಿಜವಾದ ಉತ್ತರ ಎದುರಾಗುತ್ತಿತ್ತು. ಸೂಕ್ತ ನನ್ನ ಬಾಲ್ಯದ ಗೆಳತಿ (ಬಾಲವಾಡಿ) ಅಂದಿನಿಂದಲೂ ನಿರಂತರವಾಗಿ ಸಾಗಿದೆ ನಮ್ಮ ಗೆಳೆತನ. ನಾವು ಐದನೇಯ ಕ್ಲಾಸಿನಲ್ಲಿದ್ದಾಗ ಒಮ್ಮೆ ನಮ್ಮ ಊರ ಹತ್ತಿರ ಇರುವ ಕೃಷ್ಣಮೃಗ ಅಭಯಾರಣ್ಯದ ಪ್ರವಾಸ ಕೈಗೊಂಡಿದ್ದೆವು. ಅವತ್ತು ಅವಳಿಗೆ ನಾನು ಮೊದಲ ಪ್ರಶ್ನೆ ಕೇಳಿದ್ದೆ ಸೂಕ್ತ ಪ್ರಾಣಿಗಳೆಕೆ ನಮ್ಮತರ ಮಾತಾಡಲ್ಲ. ??? ಹನ್ನೊಂದು ವರ್ಷದ ಸೂಕ್ತ ಮಾರನೇ ದಿನ ಶಾಲೆಯಲ್ಲಿ ತನ್ನ ಉತ್ತರ ಹೇಳಿದ್ದಳು. ಇಲ್ಲಾ ಅವು ಕೂಡ ಮಾತಾಡ್ತವೆ ಆದರೆ ನಮ್ಮೊಂದಿಗೆ ಮಾತಾಡಲ್ಲ ಅಷ್ಟೇ, ಅವಕ್ಕೆ ಮನುಷ್ಯರ ಮೇಲೆ ನಂಬಿಕೆ ಇಲ್ಲ. ಅವುಗಳ ಮಾತು ನಮಗೆ ಯಾಕೆ ಅರ್ಥ ಆಗಲ್ಲ ಅಂದ್ರೆ. ನಾವು ಅವುಗಳಷ್ಟು ತಿಳಿಮನಸ್ಸಿನವರಲ್ಲ. ಆವಾಗ ಅವಳೇನ ಹೇಳಿದ್ಲೊ, ನನಗೆನ ಅರ್ಥ ಆಗಿತ್ತೊ ಆ ದೇವರಿಗೆ ಗೊತ್ತು. ಅವಾಗ ನನಗೆ ತಿಳಿಯುತ್ತಿದ್ದು ಒಂದೇ ಸೂಕ್ತ ಈ ಜಗತ್ತಿನಲ್ಲಿರೊ ಎಲ್ಲ ಹುಡುಗಿಯರಿಗಿಂತ ಬುದ್ಧಿವಂತೆ!!! ನಾನಿ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ ಅವರ ತಂದೆ ನಮ್ಮ ಶಾಲೆಯಲ್ಲಿ ವಿಜ್ಞಾನದ ಮಾಸ್ತರ್. ಅವಳು ಬುದ್ಧಿವಂತೆ ಅಂತ ನಿರ್ಧರಿಸೊದಕ್ಕೆ ಇದಕ್ಕಿಂತ ಮಾನದಂಡ ಬೇಕೆ?? ಮುಂದೆ ಏಳನೇಯ ಕ್ಲಾಸಿಗೆ ಬಂದಾಗ ಅವಳ ತಾಯಿ ಮಗಳ ದೊಡ್ಡವಳಾದಳು ಎಂದು ನಮ್ಮ ಶಾಲೆಯಿಂದ ಸುಮಾರು ದೂರವಿದ್ದ ಹೆಣ್ಣುಮಕ್ಕಳ ಶಾಲೆಗೆ ಸಾಗ ಹಾಕಿದ್ದರು. ಮೂರು ಸುಧೀರ್ಘ ವರ್ಷಗಳನ್ನ ನಾವು ಬೇರೆ ಬೇರೆ ಶಾಲೆಯಲ್ಲಿದ್ದೆ ಕಳೆದೆವು. ಅದು ಅಷ್ಟಾಗಿ ಕಂಡು ಬರಲಿಲ್ಲ. ದಿನಾ ಸಂಜೆ ಅವರ ಮನೆಗೆ ಪಾಠಕ್ಕೆ ಹೋಗತಿದ್ದೆ ಅಲ್ವಾ , ಆಗ ನನ್ನ ತಲೆಬುಡವಿಲ್ಲದ ಪ್ರಶ್ನೆಗಳನ್ನ ಅವಳಿಗೆ ಕೇಳಿ ನಾನು ಸಮಾಧಾನವಾಗುತ್ತಿದ್ದೆ. ಅವರ ಅಮ್ಮ ಆಗಾಗ ತಮಾಷೆ ಮಾಡುತ್ತಿದ್ದರು ನಮ್ಮ ಸೂಕ್ತ ಇಲ್ಲಾಂದ್ರ ಇವಂಗ ಕೂಳ ಸೇರಂಗಿಲ್ಲ ಅನ್ಸತೆತಿ ನೋಡ್ರಿ ಅಂತ. ನಂತರದ ದಿನಗಳಲ್ಲಿ ಸೂಕ್ತ ಬರಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವ ಗೆಳತಿಯಾಗಿರಲಿಲ್ಲ. ಮುಂದೆ ನಾವು ಮೆಟ್ರಿಕ ಪಾಸಾದ ಮೇಲೆ ಮುಂದಿನ ಓದಿಗೆ ಯಾವ ಕಾಲೇಜಿಗೆ ಹೋಗಬೇಕು, ಯಾವ ವಿಷಯ ಅಯ್ದುಕೊಳ್ಳಬೇಕು, ನಾನ ಬಟ್ಟೆ ತೊಡಬೇಕು ಹೀಗೆ ಎಲ್ಲ ವಿಷಯಗಳಲ್ಲೂ ಅವಳದೆ ಕಡೆಯ ನಿರ್ದಾರವಾಗಿರುತ್ತಿತ್ತು. ನಮಗೆ ಬೇರೆ ಗೆಳೆಯರು ಇರಲಿಲ್ಲ ವೆಂದೆನಿಲ್ಲ ಇದ್ರು ಆದರೆ ಅದರೆ ನಮ್ಮಿಬ್ಬರ ವೈಯಕ್ತಿತ ಜಗತ್ತಿನಲ್ಲಿ ಯಾರಿಗೂ ಪ್ರವೇಶವಿರಲಿಲ್ಲ. ಮುಂದೆ ನಾನು ಓದಲಿಕ್ಕೆ ಆಗದೆ ಬದುಕಿನ ಗಿರಣಿಗೆ ಬಿದ್ದೆ, ಅವಳು ಎಸ್ ಸಿ ಕಂಪ್ಯೂಟರ್ ಸೈನ್ಸ ಮಾಡಿ ಮುಂದೆ ಮತ್ತೆ ಓದುತ್ತೆನೆ ಎಂದು ಹಾಗೆ ಸಾಗಿದಳು.
ಸರಿಯಾಗಿ ಅದೇ ಸಮಯದಲ್ಲಿ ನಾನು ನನ್ನ ವಯಸ್ಸಿನ ಹುಡುಗರು ಮಾಡುವ ಘನಕಾರ್ಯ ಮಾಡಿ ಒದ್ದಾಡುತ್ತಿದೆ. ಅವತ್ತು ಸೂಕ್ತ ಹೇಳಿದ ಮಾತು ಇನ್ನೂ ನನ್ನ ಹೃದಯದಲ್ಲಿದೆ ನಾನು ಎಡುವುವಾಗ ಆ ಮಾತುಗಳು ಮತ್ತೆ ಮತ್ತೆ ನೆನಪಿಗೆ ಲಗ್ಗೆ ಇಡುತ್ತವೆ.
ಅವತ್ತು ಮೊದಲ ಬಾರಿ ಬಾಟಲಿಯ ತುದಿಗೆ ತುಟಿ ಹಚ್ಚಿ ಮನೆಗೆ ಬಂದಿದ್ದೆ. ನನ್ನ ಮನೆಗೂ ಸೂಕ್ತಳ ಮನೆಗೂ ಎಷ್ಟು ದೂರ, ಏನೊ ವಿಷಯಕ್ಕೆ ಅಂತ ಬಂದವಳು ನನ್ನ ಅವಸ್ಥೆ ನೋಡಿ ಅವತ್ತು ಮಾತನಾಡಿದ್ದಳು. ನೋಡು ಪ್ರೀತಿ ಮಾಡುವಾಗ ಯಾರು ಕರಾರು ಮಾಡಿಕೊಂಡಿರುವುದಿಲ್ಲೊ, ಸತ್ತ ಮೇಲೂ ಜೊತೆಗಿರ್ತಿವಿ ಅಂತ. ನೀನ ಅವಳನ್ನ ಎಷ್ಟೇ ಪ್ರೀತಿಸಿರಬಹುದು ಅವಳೂ ಕೂಡ. ಆದರೆ ಅದೇ ಕಾರಣ ಇಟ್ಕೋಂಡು ನೀನ ಈ ರೀತಿ ಆಡೋದು ತಪ್ಪು. ಅಷ್ಟಕ್ಕೂ ಅವಳು ಮೋಸ ಮಾಡಿದ್ಲು ಅಂತ ತಾನೆ ನಿನ್ನ ಭಾವನೆ. ಹಾಗಾದ್ರೆ ಹೌದು ಮೋಸ ಮಾಡಿದ್ಲು ಏನಿಗ. ನೀನು ಮಾಡು ಬೇಡ ಅಂದೊರ್ ಯಾರು. ನಾನ ಹೀಗ ಹೇಳ್ತಿನಿ ಅಂತ ಬೇಜಾರಾಗಬೇಡ, ಆಮೇಲೆ ನಿನಗೆ ಹೇಳೊ ಎಲ್ಲಾ ಹಕ್ಕು ನನಗಿದೆ. ಅವಳು ಬರೊದಕ್ಕಿಂತ ಮುಂಚೆ ನಿನಗೆ ನಿನ್ನ ಜೀವನಾ ಇರ್ಲೇ ಇಲ್ವಾ?? ನಾನ್ ನಿನ್ನ ತಂದೆ ತಾಯಿ ವಿಷಯ ಕೂಡಾ ಹೇಳ್ತಿಲ್ಲ. ನಿನಗೆ ನಿನ್ನದೇ ಆದ ಜೀವನ ಇತ್ತೋ ಇಲ್ವೋ, ಅವಳು ಬಂದ್ಲು ಹೋದ್ಲು ಅಷ್ಟೇ. ನೋಡು ಒಂದು ಹುಡುಗಿಯಿಂದ ನೀನ ಯಾವತ್ತು ಜಾಸ್ತಿ ನಿರೀಕ್ಷೆ ಮಾಡಬೇಡ ಅವಳು ಕೊಡೊದ್ರಲ್ಲಿ ಕಾಮಧೇನುವಾದ್ರೆ. ಕಳೆಯೊದ್ರಲ್ಲಿ ಮೇನಕೆ, ನನ್ನ ಮಾತಿನ ಅರ್ಥ ಇಷ್ಟೇ ಒಂದು ಹೆಣ್ಣು ನಿಯತ್ತು ಅಂತ ತೋರಿಸಿದ್ರೆ ಗಂಡು ಆ ನಿಯತ್ತಿಗೆ ಕಕ್ಕಾಬಿಕ್ಕಿಯಾಗುತ್ತಾನೆ. ಅದೇ ಹೆಣ್ಣು ಚಂಚಲೆಯಾಗಿದ್ರೆ ಕಡೆಯವರೆಗೂ ಅವಳ ಮೋಸ ನಿಂಗ ಅರ್ಥ ಆಗಲ್ಲ. ನಿನ್ನ ಮೇಲೆ ಅವಳಿಗೆ ನಿಯತ್ತಿತ್ತು ಅದಕ್ಕೆ ನಿನಗೆ ಹೇಳಿ ಹೋಗಿದಾಳೆ. ನಿಜವಾಗ್ಲೂ ಸಂತೋಷ ಪಡಬೇಕು ನೀನು. ಕೆಲವೊಬ್ರು ಕಾರಣ ಇಲ್ದೇ ಹೊರಟ್ ಹೋಗ್ತಾರೆ. ನೀನ ಕೇಳ್ದೇನೆ ಇರೋ ಪ್ರಶ್ನೆಗೆ ನನ್ನ ಉತ್ತರ ಇದು.
ಸೂಕ್ತ ಮುಂದುವರೆದು ಹೀಗಂದಳು ನಾವಿಬ್ರೂ ಗೆಳೆಯರಾಗಿ ಸುಮಾರು ೨೩ ವರ್ಷ ಆಯ್ತು ಪ್ರಶ್ನೆಗಳು ಬರೀ ನಿನ್ನವೇ ಆದ್ವು ಇವತ್ತು ನಾನ್ ನಿನಗೊಂದು ಪ್ರಶ್ನೆ ಕೇಳ್ತಿನಿ ಉತ್ತರ ಹೇಳ್ತಿಯಾ. ಏನು ಎಂಬಂತೆ ಅವಳತ್ತ ನೋಡಿದೆ. ನಾವಿಬ್ರೂ ಮದುವೆ ಯಾಕ ಆಗಬೇಕು?? ನಾ ಕುಡಿದ ಕಳ್ಳು ಒಂದೇ ಸಲಕ್ಕೆ ಇಳಿದಿತ್ತು. ಸೂಕ್ತ ಮತ್ತೆ ಕೇಳಿದ್ಲು ನಾವಿಬ್ರೂ ಮದುವೆ ಯಾಕ ಆಗಬೇಕು ?? ಅಷ್ಟೋಂದು ಸುಧಿರ್ಘ ವರ್ಷದ ಗೆಳತಿಯ ಪ್ರಶ್ನೆ ಇಷ್ಟೋಂದು ಮಧುರ ಯಾತನೆಯದಾಗಿರುತ್ತೆ ಅಂತ ಅಂದುಕೊಂಡಿರಲಿಲ್ಲ ನಾ ಅವಳು ಮತ್ತೆ ಅಂದಳು ಯಾಕೆ ಆಗಬೇಕು ಅಂತ . ಮುಂದೆ ಸೂಕ್ತ ತನ್ನ ಓದು ಮುಗಿಸಿ ಬಂದ ನೂರಾರು ಕೆಲಸಗಳನ್ನ ತಿರಸ್ಕರಿಸಿ ನಾವು ಓದಿದ ಶಾಲೆಯಲ್ಲೇ ಶಿಕ್ಷಕಿಯಾದಳು ನಾನು ಅದೇ ಊರಲ್ಲಿ ಒಬ್ಬ ಯಶಸ್ವಿ ವ್ಯಾಪಾರಿಯಾಗಿ ನೆಲೆ ನಿಂತೆ. ಅವಳು ಆ ಪ್ರಶ್ನೆ ಕೇಳಿ ಮೂರನೇ ವರ್ಷಕ್ಕೆ ನಾ ಉತ್ತರ ಕೊಟ್ಟಿದ್ದೆ ಧ್ವನಿಯ ಮೂಲಕ ( ಧ್ವನಿ ನಮ್ಮ ಮಗಳ ಹೆಸರು) ಇವಳ ಬರುವಿಕೆಗಾಗಿ ನಾವು ಮದುವೆಯಾಗಬೇಕಿತ್ತು ಅಂತ. ಸೂಕ್ತಳ ಮುಖದಲ್ಲಿ ಸಂತೃಪ್ತಿಯ ನಗುವೊಂದಿತ್ತು.
ಇನ್ನೊಂದು ವಿಷಯ ನನ್ನ ಪ್ರಶ್ನೆ ಕೇಳುವ ಚಟ ಮಾತ್ರ ಇನ್ನೂ ಹಾಗೆ ಸಾಗಿದೆ .
ನಿನ್ನೆ ನಾನು ಅವಳು ಚಿಕ್ಕದಾಗಿ ಜಗಳವಾಡಿಕೊಂಡಾಗ ಕೇಳಿದ ಪ್ರಶ್ನೆ ಇದು "ಮಾತು ಮತ್ತು ಮೌನಗಳ ನಡುವಿನ ಅತೀ ಸೂಕ್ಷ್ಮದ ಹೆಸರೇನು" ಸೂಕ್ತ ಅದೇ ಮುಗುಳ್ನಗೆಯಿಂದ ಉತ್ತರಿಸಿದ್ದಳು ಧ್ವನಿ ಇನ್ನೇನ ಶಾಲೆಯಿಂದ ಬರ್ತಾಳೆ ಅವಳನ್ನ ಕೇಳು ಬಹುಶಃ ನಿನಗೆ ಉತ್ತರ ಸಿಗಬಹುದು ಅಂತ
ನೀವು ಪ್ರಶ್ನೆ ಕೇಳುತ್ತ ಹೋಗುವವರು. ಸೂಕ್ತಾ ಉತ್ತರ ಕೊಡುತ್ತ ಹೋಗುತ್ತಾರೆ. ನಿಮ್ಮಿಬ್ಬರ ಮದುವೆಗೆ ಇದಕ್ಕಿಂತ ಹೆಚ್ಚಿನ ಕಾರಣ ಬೇಕೆ? ಅಥವಾ ಈ ಕಾರಣಕ್ಕೆ "ಧ್ವನಿ" ಎನ್ನುವ ಹೆಸರು ಸರಿ ಹೊಂದುತ್ತದೆಯೊ?
ReplyDeleteಖಂಡಿತ ಸುನಾತರೇ... ಅದು ಸರಿ ಹೊಂದುವುದಕ್ಕೆ ಹುಟ್ಟಿದ ಹೆಸರು
ReplyDeleteThumba chennagide nimma modala hejje... sri sooktha anno hesru yaake?
ReplyDeleteಬಿಂದು ಅವ್ರೇ!!!!!!!!!!!!!! ಏನಿದು ನೀವಿಲ್ಲಿ??? ನಿಮ್ಮನ್ನಾ ಬ್ಲಾಗಂಗಳದಲ್ಲಿ ನೋಡಿ ಅಶ್ಚರ್ಯ,ಸಂತೋಷ ಎರಡು ಒಟ್ಟೊಟ್ಟಿಗೆ ಅಟ್ಟಾಡಿಸಿಕೊಂಡು ಬಂದಂಗ್ ಆಗ್ತಿದೆ. ಬರಹ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ. ಮತ್ತು ಶ್ರೀಸೂಕ್ತ ಅನ್ನೊ ಹೆಸರು ನಮಗೆ ಸೂಕ್ತ(ವಾದವ...)ವಾಗಿದೆ ಅನ್ಸತು ಅದಕ್ಕೆ ನಿಮಗೆ ಹೆಸರು ಇಷ್ಟ ಆಯ್ತಾ. ಭೇಟಿ ಕೊಡುತ್ತಿರಿ.ಧ್ವನಿಯ ಲೀಲೆಗಳು ಇನ್ನೂ ಬರಬೇಕಿದೆ.
ReplyDeleteನಿಮ್ಮ ಬರಹದ ರೀತಿಯಲ್ಲೇ ನಿಮ್ಮ ಅನುಭವ ತುಂಬಿದೆ , ಅಭಿನಂದನೆ ಗಳು , ಹೀಗೆ ನಿಮ್ಮ ಹೆಜ್ಜೆಗಳ ಪಯಣ ಸಾಗುತ ಇರಲಿ
ReplyDelete