Tuesday, January 10, 2012

ಕೆಲ ಕಥೆಗಳಿಗೆ ಹೆಸರಿರುವುದಿಲ್ಲ.


ಎರಡನೇಯ ನಂಬರ ಶಾಲೆ ನಮ್ಮೂರಿನಲ್ಲಿ ಎರಡು ವಿಷಯಕ್ಕೆ ತುಂಬಾ ಫೇಮಸ್ಸಾಗಿತ್ತು. ಮೊದಲ್ನೆದು ಅಲ್ಲಿ ಮಕ್ಕಳನ್ನು ಸೇರಿಸಿದರೆ ಉಡಾಳ(ತಂಟೆಕೋರ)ರಾಗುತ್ತಾರೆ ಎನ್ನುವುದು, ಎರಡೆನದು ಆ ಶಾಲೆಯ ಬಣಕಾರ ಮಾಸ್ತರ್ ರವರ ಗಣಿತ ನಮ್ಮೂರಷ್ಟೆ ಅಲ್ಲ ಇಡೀ ಸುತ್ತಮುತ್ತಲಿನ ಊರಿಗೂ ವರ್ಡ್ ಫೇಮಸ್ ಆಗಿತ್ತು. ನನ್ನ ಮಟ್ಟಿಗೆ ಹೇಳುವುದಾದರೆ ನಾನು ಮೊದಲನೇಯ ಕ್ಯಾಟಗರಿಗೆ ಸೇರಿದವನಾಗುತ್ತೆನೆ. ಅಂಥಾ ಶಾಲೆಯಲ್ಲಿ ಅದೂ ಆರನೇಯ ಕ್ಲಾಸ್ನಲ್ಲಿದ್ದಾಗ ಒಂದು ನೆನಪಿಗೆ ಬಾರದ ದಿನ ನಾನು ಎಂದು ಮರೆಯದ ಘಟನೆ ನಡೆಯಿತು. ಆಗ ತಾನೆ ಐದನೇಯ ಕ್ಲಾಸನ್ನು ಯಶಸ್ವಿಯಾಗಿ ಮುಗಿಸಿ ಆರಕ್ಕೆ ಭಡ್ತಿ ಹೊಂದಿದ ಸಮಯದಲ್ಲಿ ಹಳೆ ಚೆಡ್ಡಿಗಳ ಮರುಮಿಲನ, ಹೊಸ ಸ್ನೇಹಿತರ ಪರಿಚಯ, ಇಂಥಾವೇಲ್ಲಾ ಅಗೋ ಟೈಮಲ್ಲಿ ತೀರಾ ಅಪರೂಪ ಎನ್ನುವಂತೆ ಒಂದು ಹುಡುಗಿ ಬಂದು ತನ್ನ ಪರಿಚಯ ಮಾಡಿಕೊಂಡಿದ್ದು. ದಿನಾ ನೆನಪಿಲ್ಲ, ಬಟ್ ಆ ಹುಡ್ಗಿನಾ ಮರೆಯೋ ಛಾನ್ಸೇ ಇಲ್ಲ. ನನಗೆ ಅವಳ ಅಡ್ರೆಸ್ ಮಾತ್ರ ನೆನಪಿತ್ತು ಎಷ್ಟೇ ಪ್ರಯತ್ನ ಪಟ್ರು ಹೆಸರು ನೆನಪಿಗೆ ಬಂದಿರಲಿಲ್ಲ. ಮೊನ್ನೆ ಅವತ್ತಿನ ಸಹಪಾಠಿ ಇವತ್ತಿಗೂ ಜೊತೆಗಿರುವ ಗೆಳೆಯನ ಸಹಾಯದಿಂದ ಅವಳ ಹೆಸರು ತಿಳಿಯಿತು. ಅವಳ ಬಗ್ಗೆ ಇಷ್ಟೋಂದು ಎಲ್ಲಾ ಯಾಕಪ್ಪಾ ಹೇಳ್ತಿದಿನಿ ಅಂದ್ರೆ , ಅವತ್ತು ನಮಗೆ ಶಾಲೆಯಲ್ಲಿದ್ದ ರೇಪ್ಯುಟೇಷನ್ ಎಂಥಾದ್ದು ಅಂದ್ರೆ ಹುಡಗರಂತ ಹುಡಗರೇ ನಮ್ಮನ್ನು ಮಾತಾಡಿಸಲು ಎರಡ್ ಎರಡ ಸಾರಿ ಯೋಚನೆ ಮಾಡ್ತಿದ್ರು. ಕಾರಣ ಸರಳ ನಮ್ಮ ಗುಂಪಿನಲ್ಲಿ ಮರಿಸ್ವಾಮಿ ಅಂತ ಇದ್ದ. ಆದರೆ ಎಲ್ಲರಿಗೂ ಅವನು ಅವನ ಹೆಸರಿಗಿಂದ ಅವನ ಇನ್ನೊಂದು ಹೆಸರು ಹಂದಿಮರಿಯಿಂದಲೇ ಭಯ ಹುಟ್ಟಿಸಿದ್ದ. ನೋಡೋಕು ಹಂಗೆ ಇದ್ನ, ಈಗಲೂ ಹಾಗೆ ಇದಾನೆ. ಸ್ನೇಹಿತರ ವಲಯದಲ್ಲಿ ಈಗಲೂ ಅವನ ಹೆಸರು ಅದೇ ಇದೇ. ಮರಿಸ್ವಾಮಿ ಬಂದರೆ ಅವನ ಅಡ್ಡ ಯಾರು ಬರಬಾರದು, ಅವನ ವಿರುದ್ಧ ಯಾವುದೇ ಕಂಪ್ಲೇಟು ಮಾಸ್ತರ ಹತ್ತಿರ ಹೋಗಬಾರದು, ಹೋದರೆ ಶಾಲೆಯ ಎಲ್ಲ ಮಕ್ಕಳ ಮೇಲು ಜರಾಸಂಧನಂತೆ ಜಗಳಕ್ಕೆ ನಿಲ್ಲುತ್ತಿದ್ದ. ನಾವು ಅವನ ಸ್ನೇಹಿತರಾದ ಕಾರಣ ನಮಗೆ ಅದರ ಭಯವಿರಲಿಲ್ಲ. ಇಷ್ಟೇಲ್ಲಾ ಬ್ಯಾಕರೌಂಡ್ ಇರೋ ನನ್ನಂತಹವನನ್ನು ಒಂದು ಹುಡುಗಿ ಬಂದು ಮಾತನಾಡಿಸಿದರೆ ಅದು ನೆನಪಿನಲ್ಲಿ ಉಳಿಯದೇ ಇರುತ್ತದಾ. ? ಹಾಂ ಅವಳು ಬಂದು ಮಾತನಾಡಿಸಿದ್ದಕ್ಕೂ ಒಂದು ಕಾರಣವಿದೆ. ನಮ್ಮ ಕನ್ನಡ ಮಾಸ್ತರ ಸತತ ಪ್ರಯತ್ನದಿಂದ ನಮಗೆ ಧಾರವಾಡ ರ‍ೇಡಿಯೋ ಸ್ಟೇಷನ್ ನಲ್ಲಿ ಏಕಲವ್ಯ ನಾಟವಾಡುವ ಚಾನ್ಸ್ ಸಿಕ್ಕಿತ್ತು. ದಿನಾ ಸಂಜೆ ಐದು ಘಂಟೆಯ ನಂತರ ನಾವೇಲ್ಲಾ ನಾಟಕದ ಪಾತ್ರಧಾರಿಗಳು ಏಕಲವ್ಯನ ತಾಲೀಮಿನಲ್ಲಿ ತೊಡಗುತ್ತಿದ್ದೇವು. ಆ ನಾಟಕದಲ್ಲಿ ನಂದು ಅರ್ಜುನನ ಪಾತ್ರ(ಏಕಲವ್ಯನ ಕಥೆಯಲ್ಲಿ ಅರ್ಜುನನೇ ವಿಲನ್ನು) ನನ್ನ ಯೋಗ್ಯತೆಗೆ ತಕ್ಕನಾದ ಪತ್ರ ಸಿಕ್ಕಿತ್ತು. ಇಡೀ ಶಾಲೆಗೆ ಶಾಲೆಯೇ ಅದರ ಬಗ್ಗೆ ಆಡಿಕೊಂಡು ತಮಾಷೆ ಮಾಡಿದರು ಇವಳೊಬ್ಬಳು ಮಾತ್ರ ಪಾತ್ರ ಎಂಥಾದ್ದಿದ್ರು ಅದಕ್ಕ ನ್ಯಾಯ ಒದಗಿಸಬೇಕು ಅಂತ ಹೇಳಿ, ನಮ್ಮನ್ನಾ ಹುರಿದುಂಬಿಸಿ. ಇನ್ನೂ ಎನೇನೊ, ಅವಳ ಹೇಳಿದ ಮಾತುಗಳೆಲ್ಲಾ ಮಾಯವಾಗಿ, ಒಂದ ಹುಡುಗಿ ನನ್ನ ಮಾತನಾಡಿಸಿದ್ದಳು ಅನ್ನೋದೆ ಮುಖ್ಯವಾಗಿ ಹೋಯಿತು, ಅವಳು ಬರೀ ಅಷ್ಟಕ್ಕೆ ಮಾತ್ರ ಇವತ್ತಿಗೂ ನನಗೆ ಕಾಡುತ್ತಿಲ್ಲ. ಇದೇಲ್ಲದಕ್ಕಿಂತ ಮುಖ್ಯವಾಗಿ ಅವಳಲ್ಲಿ ತುಂಬಾ ಒಳ್ಳೆಯತನವಿತ್ತು, ಅವಳಿಗೆ ಹಸಿದವರನ್ನ ಕಂಡ್ರೆ ತನ್ನ ಟಿಫನ್ ಬಾಕ್ಸ್ ಅವರಿಗೆ ಕೊಟ್ಟು ತಾನು ಖಾಲಿ ಹೊಟ್ಟೆಲಿ ಇರೋಷ್ಟು ದಡ್ಡತನವು ಇತ್ತು, ಅವಳ ಗಣಿತ ತುಂಬಾ ಅದ್ಭುತವಾಗಿತ್ತ್ಯು, ಹಂ ಅವಳು ತುಂಬಾ ಚೆನ್ನಾಗಿ ಖೋ ಖೋ ಆಡ್ತಿದ್ಲು. ಅ ವಯಸ್ಸಿಗೆ ಇದಕ್ಕಿಂತ ಹೆಚ್ಚಿಗೆ ಗಮನಿಸಲಿಕ್ಕೆ ನಾವು ದೊಡ್ಡವರಾಗಿರಲಿಲ್ಲ , ಎಲ್ಲಾ ರೀತಿಯಿಂದಲೂ. ಅವಳಲ್ಲಿ ಇನ್ನೊಂದು ಸೂಪರ್ ಪವರ್ ಇತ್ತು, ಅವಳು ನಮ್ಮಂಗೆ ಬಲಗೈಯಲ್ಲಿ ಬರೆಯುತ್ತಿರಲಿಲ್ಲ. ಅವಳು ಬರೆಯುತ್ತಿದ್ದದ್ದು ಎಡಗೈಯಿಂದ ಅದೂ ತುಂಬಾ ಮುದ್ದಾಗಿ. ಆಮೇಲೆ ಅವಳು ಹಾಕುತ್ತಿದ್ದ ಸ್ಕರ್ಟ್ ಯಾವತ್ತು ಇಸ್ತ್ರೀಗೆಡುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಳು ನನ್ನನ್ನು ಕರೆಯುತ್ತಿದ್ದದ್ದು ನನ್ನ ಅಡ್ರೆಸ್ಸಿನಿಂದ, ಅದು ನಂಗೆ ತುಂಬಾ ಇಷ್ಟವಾಗುತ್ತಿತ್ತು. ಒಟ್ನಲ್ಲಿ ನಾವು ತುಂಬಾ ಒಳ್ಳೆ ಸ್ನೇಹಿತರಾಗಿದ್ದೇವು ಅವಳು ಊರಿನಿಂದ ತಂದ ತಿಂಡಿಗಳನ್ನು ನನಗೆ ಕೊಡುವಷ್ಟು. ಹೌದು ಅವಳಿದ್ದದ್ದು ಹಾಸ್ಟೆಲಿನಲ್ಲಿ. ಆದರೆ ಆ ಗೆಳೆತನ ತುಂಬಾ ದಿನ ಇರಲಿಲ್ಲಾ. ನಾವೇಲ್ಲಾ ಏಳನೇಯ ಕ್ಲಾಸಿನಲ್ಲಿದ್ದಾಗ ಅವಳು ನಮ್ಮ ಶಾಲೆಯಿಂದ ಬೇರೆ ಕಡೆ ಹೋಗಿದ್ದಳು ಐ ಮೀನ್ ಬೇರೆ ಊರಿಗೆ, ಅವಳ ತಂದೆಯ ವರ್ಗವಾಗಿತ್ತು. ಇದೇಲ್ಲಾ ನಡೆದು ಸುಮಾರು ಹದಿನೈದು ವರ್ಷಗಳೇ ಕಳೆದು ಹೋದ್ರು ಅವಳು ನೆನಪು ಇನ್ನೂ ಹಸಿರು. ಊರಿಗೆ ಹೋದಾಗ ಶಾಲೆಯ ಹತ್ತಿರ ಹೋದರೆ ಅವಳ ನೆನಪು ಧಿಗ್ ಅಂತ ಹೊತ್ತಿಕೊಳ್ಳುತ್ತದೆ.ಶಾಲೆ ಕೂಡ ಈಗ ಮೊದಲಂಗೆ ಉಳಿದಿಲ್ಲ ಥೇಟು ಸಿನಿಮಾಗಳಲ್ಲಿ ತೋರಿಸುವಂತೆ ಅಲ್ಲಲ್ಲಿ ಬಿದ್ದು ಹೋಗಿದೆ, ನಾವು ಆಡುತ್ತಿದ್ದ ಖೋ ಖೋ ಗ್ರೌಂಡ ಸಂಪೂರ್ಣ ಹುಲ್ಲುಮಯ, ಶಾಲೆಯ ಹತ್ತಿರವಿದ್ದ ಬಾವಿ ಪಾಳು ಬಿದ್ದಿದೆ, ನಮಗಿದ್ದ ಮೇಷ್ಟ್ರ ಯಾರು ಈಗ ಅಲ್ಲಿಲ್ಲ. ಇರೋದು ಕ್ಲೇವಲ ನೆನಪುಗಳು ಮಾತ್ರ. ಮೊನ್ನೆ ಮತ್ತೆ , ಅವಳ ಹೆಸರು ಗೊತ್ತಾದ ಮೇಲೆ facebook, orkut ಅಂತೆಲ್ಲಾ ಹುಡುಕಾಟ ನಡೆಸಿದೆ. ವ್ಯರ್ಥ ಪ್ರಯತ್ನವಾಯಿತದು. ಇಷ್ಟೇಲ್ಲಾ ಹೇಳಿ ಅವಳ ಸರ್ ನೇಮು ಆದರೂ ಹೇಳದಿದ್ದರೆ ಹೇಗೆ, ಹರಿಹರ ಅಂತ, ಆದರೆ ಹೆಸರು ಹೇಳಲಾರೆ. ಅವಳೆಲ್ಲೆ ಇದ್ದರು ಚೆನ್ನಗಿರ್ತಾಳೆ ಅನ್ನೊ ನಂಬಿಕೆ ಮತ್ತು ಯಾವತ್ತಾದರು ಸಿಗುತ್ತಾಳೆ ಎನ್ನುವ ಭರವಸೆಯೊಂದಿಗೆ ಈ ಬರಹ ಮುಗಿಯುತ್ತದೆ.