
ರ್ರೀ.....................ರ್ರಾ ತರ್ ತರ್ ತರ್...... ರ್ರೀ.....................ರ್ರಾ ತರ್ ತರ್ ತರ್.... ರ್ರೀ.....................ರ್ರಾ ದುನಿಯಾ ಮೆ ಲೋಗೊಂಕೊ ದೊಖಾ ಕಭಿ ಹೊ ಜಾತಾ ಹೈ, ಆಂಖೊಹಿ ಆಂಖೊಮೆ ಯಾರೊಂಕಾ ದಿಲ್ ಖೋ ಜಾತಾ ಹೈ!!!!!
ಬೆಳೆಗ್ಗೆಯಿಂದ ಅದೇಷ್ಟನೇ ಸಾರಿನೊ ಅವನು ಈ ಹಾಡನ್ನಾ ಕೇಳ್ತಾ ಇರೋದು. ಇತ್ತೀಚಿನ ದಿನಗಳಲ್ಲಿ ಹಾಡು ಕೇಳುವುದು ಮತ್ತು ಜಗತ್ತಿನ ಸಮಸ್ತ ದುಖಃವನ್ನು ಮರೆಸುವ ದ್ರಾವಣವನ್ನ ಸೇವಿಸುವುದು, ಇವೆರಡರ ವಿನಹ ಅವನು ಮತ್ತೇನನ್ನು ಮಾಡಿಲ್ಲ. ತಾನು ಹಾಗೇಕಿದ್ದೇನೆ ಅನ್ನೊ ಸ್ಪಷ್ಟ ಕಾರಣ ಕೂಡಾ ಅವನಿಗೆ ಗೊತ್ತಿಲ್ಲ. ಮನೆಗೆ ಬಂದ ಗೆಳೆಯರು ಕೇಳಿದರೆ ಅವರಿಗೆ ಅವನ ಉತ್ತರ, ಎನೋ ಡಿಪ್ರೆಶನ್ನು, ಏನು ಅಂತ ಸರಿಯಾಗಿ ಅವನಿಗೂ ಗೊತ್ತಿಲ್ಲ. ಅವನ ಉತ್ತರ ಯಾಕೋ ಅವನ ಸ್ನೇಹಿತರಿಗೆ ಇಷ್ಟವಾಗಲಿಲ್ಲ. ದೇವತೆಯಂತ ಹೆಂಡ್ತಿ, ಇವನಿಗೆ ಅವಳಿಂದಾ ಅಂತೂ ಖಂಡಿತಾ ತೊಂದರೆ ಆಗಿರಲ್ಲ. ಖಂಡಿತ ಇವನೇ ಮತ್ತೆನಾದ್ರೂ ಪೊರಪಾಟ್ಲು ಮಾಡಿಕೊಂಡಿರ್ತಾನೆ. ಅವನ ಬಗ್ಗೆ ಗೊತ್ತಿದ್ದವರು ಹೀಗಲ್ಲದೇ ಬೇರೆ ತರಹ ಯೋಚನೆ ಕೂಡ ಮಾಡುತ್ತಿರಲಿಲ್ಲ.
ಇವನ ಮದುವೆಯಾಗಿ ನಾಲ್ಕ ವರ್ಷ ಆಗಿದೆ ಆ ನಾಲ್ಕು ವರ್ಷಗಳಲ್ಲಿ ಇವನು ಬದಲಿಸಿದ ಕೆಲಸ ಸುಮಾರು ನಲವತ್ತು. ಎಲ್ಲೂ ನೆಲೆನಿಲ್ಲದ ಜೀವನದಿಯಂತಹ ಕಳ್ಳನಿವನು, ಕಡೆಗೆ ಕಟ್ಕೋಂಡವಳಿಗೂ ನಿಯತ್ತಿಲ್ಲದಂತಹ ಮನುಷ್ಯ, ಕೇಳಿದವರಿಗೆ ಇವನ ಸಿದ್ಧ ಉತ್ತರ ಇದ್ದೇ ಇತ್ತು ಕ್ರಿಯೆಟಿವಿಟಿ ಇರೋ ಕಡೆ ಇಂತಹ ಸಮಸ್ಯಗಳು ಸಾಮಾನ್ಯ, ನೋಡ್ತಿರಿ ನಾನ ಗೆದ್ದ ದಿನಾ ನನ್ನ ಇದೇ ಹುಚ್ಚುತನಗಳನ್ನ ನಿವೇಲ್ಲಾ ಕೊಂಡಾಡ್ತಿರಿ. ಹುಡುಗನಿಗೆ ಒಂದಿಷ್ಟು ಕನ್ನಡದ ಸಾಹಿತ್ಯ ಮತ್ತು ಇರೋಬರೋ ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡಿದ ಅನುಭವ ಇತ್ತು, ಅವನು ತಿಳಿದುಕೊಂಡಿದ್ದೆ ಜಗತ್ತಿನಲ್ಲಿ ಅತೀಶ್ರೇಷ್ಠವಾದದ್ದು ಎನ್ನುವ ನಂಬಿಕೆಯೊಂದು ಅವನಲ್ಲಿ ಬೇರೂರಿ ಅವನ ಇವತ್ತಿನ ಸ್ಥೀತಿಗೆ ಅದೂ ಒಂದು ಕಾರಣವಾಗಿತ್ತು ಮತ್ತು ಅವನ ಈ ತಿಕ್ಕಲುತನವೇ ಅವನಿಗೆ ಯಾವ ಕೆಲಸದಲ್ಲೂ ಮೊದಲಸಲದ ಸಂಬಳದವರೆಗೆ ನಿಲ್ಲಲು ಬಿಡುತ್ತಿರಲಿಲ್ಲ. ಶುರುವಿನಲ್ಲಿ ಅವನ ಹೆಂಡ್ತಿ ನಿಜವಾಗಲೂ ತನ್ನ ಗಂಡ ಜಗತ್ತಿನ ಅತೀ ಬುದ್ಧಿವಂತ ಜೀವಿಗಳಲ್ಲಿ ಒಬ್ಬ ಎಂದೇ ತಿಳಿದುಕೊಂಡಿದ್ದಳು. ಅವನ ಕ್ರಿಯೆಟಿವಿಟಿ ಎನ್ನುವುದು ಬರಿ ಬೊಗಳೇ ಎನ್ನುವುದು ಮೊದಲ ಬಾರಿಗೆ ಅವನು ಅವಳನ್ನು ಹೊಗಳಿ ಒಂದು ಹಿಂದಿಯ ಹಾಡನ್ನು ಕದ್ದು ಕನ್ನಡದಲ್ಲಿ ಬರೆದು ಅವಳಿಗೆ ಕೊಟ್ಟಾಗ, ಈ ಹಾಡು ಹಿಂದಿಲಿ ಕೇಳ್ಡಂಗಿದೆರಿ ಅಂದವಳ ಜೊತೆ ಜಮದಗ್ನಿ ಒಂದು ತಿಂಗಳು ಮಾತೇ ಬಿಟ್ಟಿದ್ದ. ಅವತ್ತಿಗೆ ಕಟ್ಟಿಕೊಂಡಳಿಗೆ ಕನಫರ್ಮ ಆಗಿಹೋಗಿತ್ತು ಓ ನನಗೆ ಗಂಟು ಬಿದ್ದಿರುವುದು ಖಾಲಿ ಡಬ್ಬದಲ್ಲಿರೋ ಕಲ್ಲು ಅಂತ, ಅವತ್ತಿನಿಂದ ಹೆಂಗೋ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದ ಆ ಹೆಣ್ಣುಮಗು ಒಂದು ದಿನ ಮುನಿದುಕೊಂಡು ಹೇಳಿದ್ದಳು ನೋಡ್ರಿ ನೀವು ಅದೇನು ಸಾಧನೆ ಮಾಡಬೇಕು ಅಂತಿದಿರೋ ಅದನ್ನ ಮೊದ್ಲು ಡಿಸೈಡ್ ಮಾಡಿ ಸಿನಿಮಾ ಮಾಡ್ತಿರೋ, ಸೀರಿಯಲ್ ಮಾಡ್ತಿರೋ, ಕಥೆಗಾರರಾಗ್ತಿರೋ, ಒಂದ ನಿರ್ಧಾರಕ್ಕೆ ಬನ್ನಿ. ಆವಾಗ ನಿಮಗೆ ಒಂದು ಸ್ಪಷ್ಟತೆ ಸಿಗಬಹುದು ಅಂತ ತುಂಬಾ ಶಾಂತವಾಗಿ ಹೇಳಿದ್ದಳು. ಇವನಿಗೆ ಹೆಂಡತಿಯ ಮೇಲೆ ಸಿಡಿದೇಳಲು ಅಷ್ಟೇ ಸಾಕಾಗಿತ್ತು. ಇವನ ತಿಕ್ಕಲುತನಗಳಿಂದ ಬೇಸತ್ತಿದ್ದ ಹುಡುಗಿ ಇವನಿಂದ ಸ್ವಲ್ಪ ದಿನ ದೊರ ಇರೋಣ ಎಂದು ತವರುಮನೆಯೆಂಬ ಸಿದ್ಧಸೂತ್ರದ ಮೊರೆಹೋಗಿದ್ದಳು, ಅವಳು ಹೋಗಿ ಮೂರು ದಿನಕ್ಕೆ ಅವನ ಪರಿಸ್ಥೀತಿ ಹೀಗಾಗಿದ್ದು. ಇವನು ಏನಾದ್ರೂ ಮಾಡೇ ಮಾಡುತ್ತಾನೆ ಅಂತ ಅವತ್ತಿನಿಂದ ಕಾಯುತ್ತಿದ್ದ ಕೆಲವು ಸ್ನೇಹಿತರು ಇವನನ್ನು ನೋಡಲು ಬಂದಾಗಲೇ ಅವರಿಗೆ ಇವನ ಈಗೀನ ಪರಿಸ್ಥೀತಿಯ ಅರಿವಾಗಿದ್ದು. ಅವರು ಹೇಳುವಷ್ಟು ಹೇಳಿ ಇದೂ ಉದ್ಧಾರ ಆಗೋ ಜಾತಿ ಅಲ್ಲ ಅಂತ ಅನ್ನಿಸಿ ಅಲ್ಲಿಂದ ಕಾಲ್ತೆಗೆದಿದ್ದರು. ಎಲ್ಲರೂ ಹೋದ ಮೇಲೆ ಇವನು ಮತ್ತದೇ ದುನಿಯಾ ಮೇ.. ಲೋಗೊಂಕೋ... ದಲ್ಲಿ ಕಳೆದು ಹೋದ, ಇವತ್ತು ಅಲ್ಲೇ ಇದ್ದಾನೆ. ಹೊರಬರುವ ಯಾವ ಲಕ್ಷಣವೂ ಇಲ್ಲ. ಮಾಡೋದಕ್ಕೆ ಬೇರೆ ಕೆಲ್ಸಾಇಲ್ಲದ ಕಾರಣ ಈಗ ಸದಾ ಮನೆಲೇ ಇರ್ತಾನೆ, ಮನೆಲಿ ಈ ಪ್ರಾಣಿ ಬಿಟ್ರೆ ಯಾರೂ ಇಲ್ಲದಕ್ಕೊ ಏನೋ ಈಗ ತನ್ನೊಳಗೆ ತಾನೇ ಮಾತನಾಡುವುದು, ತನ್ನನ್ನ ತಾನೇ ಬಯ್ಯುವುದು, ತನ್ನ ಮೇಲೆಯೇ ನಗುವುದು, ತಲೆ ನೆಟ್ಟಗಿದ್ದರೆ ಯಾರಿಗಾದರೂ ಫೋನ ಮಾಡಿ ಯಾಕೆ ಕನ್ನಡ ಸಿನಿಮಾಗಳು ಸೋಲುತ್ತವೆ , ನಾವೇಲ್ಲಾ ಕನ್ನಡ ಸಿನಿಮಾದವರು ಯಾವತ್ತು ಉದ್ಧಾರಾ ಅಗೋದು ಅಂತ ತಳಬುಡವಿಲ್ಲದ ಮಾತುಗಳನ್ನಾಡುತ್ತ ಆಕಡೆ ಇದ್ದವರ ಪ್ರಾಣ ತೆಗೆಯುತ್ತಾನೆ. ಇವತ್ತಿಗೂ ಅವನು ಬದಲಾಗಿಲ್ಲ ಬಹುಶಃ ಆಗುವುದು ಇಲ್ಲ. ಇವನನ್ನು ಅಲ್ಲಿ ಇಲ್ಲಿ ಹುಡುಕಬೇಡಿ. ಇವನು ಎಲ್ಲೇಲ್ಲೂ ಇದ್ದಾನೆ ನಮ್ಮೊಳಗೂ!!!!!!!!!!!!!!