Saturday, August 22, 2009

ಅಮರ ಮಧುರಾ ಪ್ರೇಮಾ......................



ದೃಶ್ಯ೧
ನೀನ ನಗ್ತಿಯಾ ತುಂಬಾ ಸುಂಬಾ ಸುಂದರವಾಗಿ, ಮೊಸ್ಟ್ಲಿ ಆ ನಗು ಕೇಳೇ ನಾನ್ ಬಿದ್ದ ಹೋಗಿರಬೇಕು.
ಅಹಾ ಇಂಥಾ ಮಾತಿಗೆನ ಕಮ್ಮಿ ಇಲ್ಲ ಸಾಹೇಬ್ರು,
ಇಲ್ಲಾ ಕಣೇ ನಿಜ ನಾ ಹೇಳ್ತಿರೋದು, ನೀ ನಂಬಬೇಕು ನನ್ನ. ಇಲ್ಲಾಂದ್ರೆ ಯಾವತ್ತು ನೋಡ್ದಿರೊ ನಿನ್ನ ಇಷ್ಟೋಂದು ಪ್ರೀತ್ಸೋಕೆ ನನ್ನ ಕೈಯಿಂದ ಆಗ್ತಿತ್ತಾ, ನಾನಿರ್ಲಿ ಬಿಡು ಯಾರೇ ಆದ್ರೂ ನಿನ್ನ ನಗು, ನಿನ್ನ ಮಾತು ನಿನ್ನ ಹಾಡು ಕೇಳಿ ನಿನ್ನ ಪ್ರೀತಿಯಲ್ಲಿ ಬಿಳ್ದೆ ಇರೋಕ ಸಾಧ್ಯಾನೇ ಇಲ್ಲ.
ಮನೋಜ ನಾವು ಯಾವತ್ತ ಭೇಟಿಯಾಗೋಣ??
ನೀನ ಹೂಂ ಅನ್ನು ಈಗ್ಲೇ ಡೆಹಾರಡೂನ ಪ್ಲೈಟ್ ಹತ್ತಿನಿ?
ಏ ಹೋಗೊ ಬರಿ ಆಗಲಾರದ್ದೆ ಮಾತಾಡ್ತಿಯಾ, ನಿಂಗೆ ಬೆಂಗಳೂರಿಂದ ಇಲ್ಲಿಗೆ ಡೈರೆಕ್ಟ ಫ್ಲೈಟ್ ಇಲ್ಲಾ ಅನ್ನೊದಾದ್ರೂ ಗೊತ್ತಾ? ನೋಡು ನಿನ್ನ ಜೊತೆ ಸೇರಿ ನಾನು ನಿನ್ನ ತರಹಾನೆ ಮಾತಡ್ತಾ ಇದಿನಿ ಇಂಗ್ಲೀಷ ನಾಟಕಗಳ ಡೈಲಾಗುಗಳು ಎಲ್ಲಾ, ಎಲ್ಲಾ ಸಹವಾಸ ದೋಷ ಎನ್ಮಾಡೊಕಾಗುತ್ತೆ.
ಮತ್ತೆ ಎನ ವಿಷಯ. ಏ ಯಾವಾಗೊ ನಾವು ಸಿಗೊದು, ಫೋನು ಬೋರ ಆಗೊದಕ್ಕಿಂತ ಮೊದ್ಲು ಬಂದ ಬಿಡೊ ಪ್ಲೀಸ್.
ಹೂಂ ಬರ್ತಿನಿ ಇಲ್ಲಿ ನನ್ನ್ ಎಕ್ಸಾಮ್ಸನಾ ಯಾರು ಮುಗ್ಸತಾರೆ?
ಅಂದ್ರೆ ನಿನ್ನ ಟ್ರೈನಿಂಗ ಎಲ್ಲಾ ಮುಗುದು ನೀನ ಇಲ್ಲಿಗೆ ಬರೋವರಗು ಕಾಯಬೇಕಾ?
ಎ ದಡ್ಡಾ ನಾನ ಎಲ್ಲಿ ಹಾಗ ಹೇಳ್ದೆ? ಇನ್ನ ಒಂದು ತಿಂಗಳು ಕಾಯಿ. ಆಮೇಲೆ ನಂಗ ೧೫ ದಿನ ರಜೆ ಆ ಗ್ಯಾಪಲ್ಲಿ ಖಂಡಿತ ನಾವ್ ಮೀಟ್ ಮಾಡೋಣ.
ಸರಿ ಈಗೇನ ಮಾಡ್ತಿದಿಯಾ,
ಇನ್ನೇನ ಮಾಡ್ಲಿ ನಿನ್ನ ಜೊತೆ ಮಾತಾಡ್ತಾ ಬೆಡ್ ಮೇಲೆ ಮಲಗಿದಿನಿ. ನೀನ ಹೇಳು ಎನ್ಮಾಡ್ತಿದಿಯಾ?
ಸೇಮ್ ಹಿಯರ್, :)
ಮತ್ತೆ ನಿನ್ನ ಕೆಲಸ ಹೇಗ ನಡೆದಿದೆ, ನಾನ ಬೆಂಗಳೂರಿಗೆ ಬರೋ ಅಷ್ಟರಲ್ಲಿ ನಿನ್ನ ಚಿಟ್ಟೆ ಪಾರ್ಕ ರೆಡಿ ಇರುತ್ತಾ.
ಹೇ ಅದು ಬರಿ ಚಿಟ್ಟೆ ಚಿಟ್ಟೆ ಪಾರ್ಕ ಅಲ್ಲಾ "ಇಂದುಮತಿ ಚಿಟ್ಟೆ ಪಾರ್ಕ್" ತಿಳಿತಾ.
ಓ ಶಹಜಾನ್ ಮುಮ್ತಾಜ ಸ್ಟೋರಿ ರೀಪಿಟ್ ಟೆಲಿಕಾಸ್ಟ್?? :) ಸರಿ ಮನೋಜ ನಿದ್ದೆ ಬರ್ತಿದೆ ಮಲಗ್ತಿನಿ.
ಸರಿ ಹಾಗಾದ್ರೆ ನಿನ್ನ ಫೋನಿಗ್ ಕಾಯ್ತಿನಿ ಗುಡ್ night.
ಇಂದುಮತಿ:- (censor
ಮನೋಜ:- (censor
ದೃಶ್ಯ ೨
ಸುಮಾರು ದಿನ ಒಂದೇ ರೀತಿಯ ದೃಶ್ಯಗಳು ನಂತರ ಅವರಿಬ್ಬರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಭೇಟಿಯಾಗುತ್ತಾರೆ. ಇಂದುಮತಿಯನ್ನು ಮೊದಲ ಬಾರಿಗೆ ನೋಡುವ ಮನೋಜನ ಕಣ್ಣುಗಳಲ್ಲಿ ಆಶ್ಚರ್ಯದ ಕಂತೆಯಿರುತ್ತದೆ. ಫೋನನಲ್ಲಿ ಕೇಳಿದ ಧ್ವನಿಗಿಂತ ಸಾವಿರ ಪಟ್ಟು ಸುಂದರಿ ಇಂದುಮತಿ. ಅವಳು ಅಷ್ಟೇನು ಆಶ್ಚರ್ಯ ಪಡಲ್ಲ ಅವಳು ಅಂದುಕೊಂಡ ಹಾಗೆ ಮನೋಜ ವಡ್ಡನ ಹಾಗೆ ಬಂದಿರ್ತಾನೆ. ಮೊದಲು ಅವಳ ಅಣತಿಯಂತೆ ಅವರು ಮಲ್ಲೇಶ್ವರದ ಸಾಯಿಬಾಬಾ ದರ್ಶನ ಮಾಡಿ ನಂತರ ಅದರ ಎದುರಿಗಿರೊ ಕಾಫೀಡೇಗೆ ಲಗ್ಗೆ ಇಟ್ಟಿದ್ದರು. ಕಾಫೀ ಅವಳಿಗೂ ಇಷ್ಟ ಇಲ್ಲ, ಇವನಿಗೂ ಇಲ್ಲ ಆದರೂ ಅವರು ಅಲ್ಲಿಗೆ ಹೋಗಿದ್ದರು. ನಿರರ್ಗಳವಾಗಿ ಮಾತುಗಳು ಭೋರ್ಗರೆದವು. ಇವಳ ಎಜುಕೆಶನ್ ಮುಗಿಯೊ ಸಮಯಕ್ಕೆ ಇವನ ಪ್ರಾಜೆಕ್ಟು ಮುಗಿದಿರಬೇಕು ಮತ್ತು ಅವತ್ತೆ ಅವರಿಬ್ಬರು ಅದೇ ಮಲ್ಲೇಶ್ವರದ ಸಾಯಿಬಾಬಾ ದೇವಸ್ಥಾನದಲ್ಲಿ ಮದುವೆಯಾಗುವುದು ಎಂಬ ತಿರ್ಮಾನಕ್ಕೆ ಬಂದರು.
ಮದುವೆ ಆಯ್ತಾ???
ಮುಂದುವರೆಯುತ್ತದೆ....................





Wednesday, August 19, 2009

ಹೆಜ್ಜೆ ಎರಡು!!!!


ಎಲ್ಲೊ ನೋಡಿದ ನೆನಪು ಅವನನ್ನಾ?? ಎಲ್ಲಿ ?? ಊಹೂಂ ಜ್ಞಾಪಕ ಶಾಲೆಗೆ ಬೀಗ ಬಿದ್ದಂಗೆ ಅನ್ಸತಿದೆ. ಸುಮ್ಮನೆ ಹೊರಟ ಹೋಗಬೇಕು ಅಂದ್ರೆ ಅದು ಆಗ್ತಿಲ್ಲ ನನ್ನ ಕೈಯಲ್ಲಿ, ಹಂಗಿದಾನೆ ಹುಡುಗ ಅಂದ್ರೆ ಚೆನ್ನಾಗಿದಾನೆ ಅಂತಲ್ಲ. ನೋಡಿದ ತಕ್ಷಣ ಯಾರೆ ಆದ್ರೂ ನಿಲ್ಲಬೇಕು ಹಂಗಿದಾನೆ ಬಹುಶಃ ಇದು ಸರಿಯಾದ ಪದ ಅವನ ಬಗ್ಗೆ ಹೇಳಲು. ಚೈತನಾ ಅವತ್ತು ಆಫೀಸಿಗೆ ರಜೆ ಅಂತ ಅಮ್ಮನ ಜೊತೆ ಶಾಪಿಂಗ ಬಂದವಳು, ಅಲ್ಲಿ ಅವನ ದರ್ಶನ ಮಾಡಿ ಅವನನ್ನು ಎಲ್ಲೊ ನೋಡಿದ್ದೆನೆ ಎಂದು ಭಾವಿಸುತ್ತಾ ಅದು ನೆನಪಿಗೆ ಬಾರದೆ ಕಷ್ಟ ಅನುಭವಿಸುತ್ತಿದ್ದಳು.
ಅಲ್ಲಿ ಆ ಹುಡುಗ ಈಗ್ಲಾದರೂ ಅವಳು ಬಂದು ಮಾತಾಡಿಸಬಾರದಾ ನನ್ನ ಅಂತ ಚಟಪಡಿಸ್ತಾ ನಿಂತಿದ್ದ ಅವನ ಗೆಳೆಯರು ಇವನ ಒದ್ದಾಟ ನೋಡಲಾಗದೆ ಅವನನ್ನು ಅಲ್ಲೇ ಬಿಟ್ಟು ಅದೇ ಶಾಪಿಂಗ ಮಾಲ್ ನಲ್ಲಿರುವ ಸ್ಕೆರಜೋನ್ ಒಳಗೆ ನುಗ್ಗಿದ್ದರು.

ಅವತ್ತಿಗೆ ಸರಿಯಾಗಿ ಆರು ತಿಂಗಳ ಹಿಂದೆ ಚೈತನಾ ತನ್ನ ಕಂಪನಿಯ ಕೆಲಸದ ನಿಮಿತ್ತ ಪೂಣೆಗೆ ಹೋಗಿ ತನ್ನ ಕೆಲಸ ಮುಗಿಸಿಕೊಂಡು ಎರಪೊರ್ಟ ತಲುಪಲಿಕ್ಕೆ ಅಂತ ಟ್ಯಾಕ್ಸಿಗಾಗಿ ಶಾಲಿಮಾರ ನಲ್ಲಿ ನಿಂತಾಗ ಸಂಜೆ ಸುಮಾರು ೫ ಘಂಟೆ , ಸುಮಾರು ಹೊತ್ತಿನ ನಂತರ ಬಂದಿದ್ದು ಒಂದೇ ಒಂದು ಟ್ಯಾಕ್ಸಿ ಇನ್ನೇನು ಇವಳು ಅದರ ಹತ್ತಿರ ಹೋಗಬೇಕು ಅಷ್ಟರಲ್ಲಿ ಆ ಹುಡುಗ ಟ್ಯಾಕ್ಸಿಯವನನ್ನು ರೂಢಿಗೂ ಒಂದು ಮಾತು ಕೇಳದೆ ಎರಪೊರ್ಟ್ ಚಲಾ ಅಂತ ಮರಾಠಿಯಲ್ಲಿ ಆದೇಶಿಸಿದ್ದ ಇವಳಿಗೊ ಇನ್ನ ಮುಕ್ಕಾಲು ತಾಸಲ್ಲಿ ಎರಪೊರ್ಟಲ್ಲಿ ಇಲ್ಲ ಅಂದ್ರೆ ಇವತ್ತಿಡಿ ದಿನ ಪೂಣೆಯಲ್ಲೆ ಕಳಿಬೇಕು ಅನ್ನೊ ಸಂಕಟ ಟ್ಯಾಕ್ಸಿ ಹತ್ತಬೇಕು ಅಂದ್ರೆ ಇವನ್ಯಾರೊ ಅಪಸ್ಮಾರಿ ಬಂದು ವಕ್ಕರಿಸಿದಾನೆ. ಚೈತನಾ ದಾರಿ ಕಾಣದೇ ಸುಮ್ಮನೆ ನಿಂತಿದ್ದಳು ಟ್ಯಾಕ್ಸಿ ಸ್ವಲ್ಪ ಮುಂದೆ ಹೋಗಿ ಮತ್ತೆ ಹಿಂದೆ ಬಂದಿತ್ತು. ಹಿಂದಿನ ಸೀಟಿನಲ್ಲಿದ್ದ ಪಾಪಿ ಮಾತನಾಡಿದ್ದ. " ಅತ್ತ ಪೀಕ ಅವರ್ ಅಹೆ ತುಮಾನ ಟ್ಯಾಕ್ಸಿ ಮಿಳ್ಣಾರ್ ನಹಿ ಅತ್ತ ಕುಟ ಜಾಯಚ್ ಹೈ ತುಮಾನ್" ಅವನ ಭಾಷೆ ಅವನಿಗೆ ಪ್ರಿಯವಾಗಿತ್ತು. ಇವಳು ಕಣ್ಣ ಕಣ್ಣ ಬಿಟ್ಟದ್ದ ನೋಡಿ ಆಂಗ್ಲ ಭಾಷೆಯಲ್ಲಿ ಕೇಲಿದ್ದ ಭೂಪ "where do you want to go" ಎರಪೊರ್ಟ ಬೇರೆ ಎನೂ ಹೇಳಲಿಲ್ಲ ಅವಳು ಅದಕ್ಕೆ ಅವನು ಮತ್ತೆ ಅದೇ ಭಾಷೆಯಲ್ಲಿ ತಾನೂ ಕೂಡಾ ಅಲ್ಲಿಗೆ ಹೋಗ್ತಾ ಇದಿನಿ ನಿಮಗೆ ಅಭ್ಯಂತರ ಇಲ್ಲ್ವಾದ್ರೆ ನನ್ನ ಜೊತೆ ಬರಬಹುದು ಅಂತ ಕರೆದಾಗ ಚೈತನಾ ಟ್ಯಾಕ್ಸಿ ಹತ್ತಲು ಹಿಂದೇಟು ಹಾಕಿದಳು. ಅವಳ ಭಯ ಅರ್ಥವಾದವನಂತೆ ಆ ಹುಡುಗ ತಾನು ಕೆಲಸ ಮಾಡುವ ಕಂಪನಿಯ ಕಾರ್ಡು ತನ್ನ ಗುರುತಿರುವ ಕಾರ್ಡುಗಳನ್ನ ಅವಳ ಮುಂದೆ ಹಿಡಿದಾಗಲೇ ಚೈತನಾ ಅ ಟ್ಯಾಕ್ಸಿಯಲ್ಲಿ ಕಾಲಿಟ್ಟಿದ್ದು. ಎರಪೊರ್ಟ ತಲುಪುವ ವರೆಗೂ ಹುಡುಗ ಒಂದೇ ಒಂದು ಮಾತು ಆಡದೇ ಉಳಿದ ನಿಲ್ದಾಣ ಬಂದಾಗ ಟ್ಯಾಕ್ಸಿ ಬಿಲ್ಲನ್ನು ಅವಳಿಗೆ ಕೊಡಲು ಬಿಡದೆ ತಾನೆ ಕೊಟ್ಟು . ಅವಳ ಮುಂದೆ ಒಂದು ನಗು ಚೆಲ್ಲಿ ಮಾಯವಾಗಿದ್ದ. ಎಲ್ಲ ರೀತಿಯ ಚಿಕಿಂಗಗಳು ಮುಗಿದು ರೇಲಿಂಗ ಹತ್ತಿರ ಹೊರಟಾಗ ಆ ಹುಡುಗ ಮತ್ತೆ ಎದುರಾಗಿದ್ದ. ಅದೇ ನಗು ಮುಖದೊಂದಿಗೆ ಈ ಸಾರಿ ಮಾತನಾಡಿದ್ದ ಅವನು, ಕರ್ನಾಟಕದವರಾ ನೀವು ಇವಳಿಗೆ ಆಶ್ಚರ್ಯ ಅದ ಹ್ಯಾಗ ಕಂಡ ಹಿಡ್ದೆ ನೀನು ಅನ್ನೊ ಮುಖಭಾವದಲ್ಲಿ ನಿಂತೊಳಿಗೆ ಮತ್ತೆ ಉತ್ತರಿಸಿದ್ದ ಹುಡುಗ. ನೀವು ಬೆಂಗಳೂರು ಫ್ಲೈಟ್ ಟೈಮ್ ನೋಡ್ತಾ ನಿಂತಿದ್ದು, ಅದು ಲೇಟು ಅಂತ ಗೊತ್ತಾದ ಮೇಲೆ ನಿಮ್ಮ ಮನೆಗೆ ಫೋನ ಮಾಡಿ ವಿಷಯ ತಿಳಿಸಿದ್ದು, ಜೊತೆಗೆ ವಿನಾ ಕಾರಣ ನನ್ನ ಹೊಗಳಿದ್ದು ಇದನ್ನೇಲ್ಲಾ ಕೇಳಸ್ಕೊಂಡೆ. ಚೈತನಾಗೆ ಒಂದು ಕ್ಷಣ ಅವನು ನನ್ನ ಹಿಂಬಾಲಸ್ತಾ ಇದಾನಾ ಅಂತ ಅನ್ನಿಸದೆ ಇರಲಿಲ್ಲ. ಅಷ್ಟರಲ್ಲಿ ಮತ್ತೆ ಹುಡಗನೇ ಮಾತಾಡಿದ , ನಾನ್ ಇದನ್ನೇಲ್ಲಾ ಮಾಡದ್ದಕ್ಕೆ ಬೇರೆ ಎನೇನೋ ಅರ್ಥ ಕಲ್ಪಿಸಕೊಬೇಡಿ ಸರಿ ನನ್ನ ಫ್ಲಟ್ ಇನ್ನೂ ಸ್ವಲ್ಪ ಹೊತ್ತಿಗೆ ಇದೆ, ನಾನ್ ಹೋಗ್ದೆ ಇದ್ರೂ ಅದು ತನ್ನ ಟೈಮಿಗೆ ಹೊರಟ ಹೋಗುತ್ತೆ. ಥ್ಯಾಂಕ್ಯೂ ನನ್ನ ಇಲ್ಲಿಯವರೆಗೂ ಸಹಿಸಿಕೊಂಡಿದ್ದಕ್ಕೆ ಎಂದು ಮತ್ತೊಮ್ಮೆ ಅವಳಿಗೆ ಥ್ಯಾಂಕ್ಸ ಹೇಳಿ ಇನ್ನೇನ ಅವನು ಹೊರಡಬೇಕು ಆಗ ಚೈತನಾ ಅವನನ್ನಾ ಕೇಳಿದ್ಲು, ನಿಮ್ಮ ಹೆಸರೆ ಹೇಳಲಿಲ್ಲಾ ನೀವು. ನಿಮ್ಮ ಋಣದಲ್ಲಿರೊಳು ನಾನು ಕಡೆ ಪಕ್ಷ ನಿಮ್ಮ ಹೆಸರಾದರೂ ತಿಳ್ಕೊಬಹುದಾ ಅಂತ. ಅದಕ್ಕೇನ್ ಅಭ್ಯಂತರ ಇಲ್ಲಾ ಇನ್ನ ಎರಡ ನಿಮಿಷ ನಾನ ಇಲ್ಲೇ ಇದ್ರೆ ಇಡೀ ಎರಪೊರ್ಟ್ ಗೆ ಕೇಳೋ ಹಾಗೆ ಇಲ್ಲಿ ಸ್ಟಾಪೆ ಅನೌನ್ಸ ಮಾಡ್ತಾರೆ ಆವಾಗ್ ಕೇಳಿ ಎಂದು ಅಲ್ಲಿಂದ ಬಿರಬಿರನೇ ನಡೆದು ಹೊರಟೆ ಹೋದ. ಅವನ ಹೆಸರು ಕೂಗಬಹುದು ಅಂತ ಚೈತನಾ ಅಲ್ಲಿ ಕಾಯ್ತಾನೇ ಇದ್ಲು ಹೆಸರು ಕೂಡಾ ಗೊತ್ತಿಲ್ಲದವನನ್ನು. ಆಮೇಲೆ ಇವಳ ಫ್ಲೈಟು ಬಂದು ಆ ವಿಷಯವನ್ನು ಅಲ್ಲಿಗೆ ಬಿಟ್ಟು ಮರಳಿ ತನ್ನ ಲೋಕಕ್ಕೆ ವಾಪಸಗಿದ್ದಳು.

ಇದಾಗಿ ಸರಿಯಾಗಿ ಆರನೇ ತಿಂಗಳಿಗೆ ಮತ್ತೆ ಅವನು ಎದುರಾಗಿದ್ದ. ಅಮ್ಮ ಯಾವುದೊ ಸೀರೆಯಲ್ಲಿ ಕಳೆದು ಹೋಗಿದ್ದಳು ಚೈತನಾ ಅವನನ್ನಾ ಮಾತಾಡಿಸೆ ಬಿಡೊಣ ಎಂಬ ಗಟ್ಟಿ ಧೈರ್ಯ ಮಾಡಿ ಅಮ್ಮನಿಗೆ ತಾನು ಪಕ್ಕದ ಅಂಗಡಿಲಿರ್ತಿನಿ ಅಂತ ಹೇಳಿ ಹೊರನಡೆದಳು ಆ ಹುಡುಗ ಇನ್ನೂ ಅಲ್ಲೇ ನಿಂತೆ ಇದ್ದ .
ಚೈತನಾ ನೇರವಾಗಿ ಅವನ ಬಳಿ ಬಂದವಳೇ ನೀವ್ ಎಲ್ಲಿ ಹೊರಟ್ ಹೋಗಿರ್ತಿರಾ ಅನ್ಕೊಂಡೆ ಅವತ್ತು ನೀವು ನಿಮ್ಮ ಹೆಸರು ಕೂಡಾ ಹೇಳಲಿಲ್ಲ. ಹಾಗೆ ಹೊರಟ ಹೋದ್ರಿ ಇವತ್ತು ಹಾಗೆ ಮಾಡ್ತಿರಾ ಆನ್ಕೊಂಡೆ ಸದ್ಯ ಸಿಕ್ರಲ್ಲಾ. ಅದಕ್ಕೆ ಆ ಹುಡುಗ ಹೇಳಿದ್ದು ಒಂದೇ ಮಾತು ನಾನ ಅವತ್ತು ಮಾಡಿದ್ದು ತಪ್ಪು ಆ ತಪ್ಪನ್ನಾ ಮತೀ ನಾ ಮಾಡಿದ್ರೆ ದೇವ್ರು ಕೂಡಾ ನನ್ನ ಮೇಲೆ ಕೋಪಾ ಮಾಡ್ಕೊತಾನೆ ಕೊಟ್ಟ ಅವಕಾಶ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಇವನು ಅಂತ. ನೀವು ಇವತ್ತಿಲ್ಲಿ ಬರದೆ ಇದ್ರೂ ಕೂಡಾ ನಾನ ಇಲ್ಲೇ ಕಾಯ್ತಿದ್ದೆ . ನನಗೆ ಸುತ್ತಿ ಬಳಿಸಿ ಮಾತಾಡಿ ಅಭ್ಯಾಸ ಇಲ್ಲಾ ನೇರವಾಗಿ ವಿಷಯ ಹೇಳ್ತಿನಿ ನನ್ನ ಹೆಸರು ರಿಷಿ ಅಂತ ಒಂದ mnc ಲಿ ಕೆಲ್ಸಕ್ಕಿದಿನಿ ತಿಂಗಳ ಸಂಬಳ ಐದಂಕಿಲಿ ಸಿಗುತ್ತೆ ನಂಗ ನೀವ ಇಷ್ಟ ಆಗಿದಿರಾ ಅದಕ್ಕೆ ನಾನ್ ನಿಮ್ಮನ್ನಾ ಮದುವೆ ಮಾಡ್ಕೊಬೇಕು ಅಂತಿದಿನಿ . ಚೈತನಾಗೆ ಏನ್ ಉತ್ತರಾ ಕೊಡಬೇಕು ಅಂತಾ ತಿಳಿಲೇ ಇಲ್ಲಾ. ಆದ್ರೆ ಅವಳಿಗೆ ಹುಡುಗ ದೃಢ ನಿರ್ಧಾರ ಇಷ್ಟ ಆಗಿತ್ತು .
ಅದ್ಕೆ ಅವರ ಮದುವೆ ಕೂಡಾ ಆಯ್ತುರಿ :)

Wednesday, August 12, 2009

ಮೊದಲ ಹೆಜ್ಜೆ!!


ಮಾತು ಮತ್ತು ಮೌನಗಳ ನಡುವಿನ ಅತೀ ಸೂಕ್ಷ್ಮದ ಹೆಸರೇನು???
ಈ ಪ್ರಶ್ನೆಯನ್ನ ಸುಮಾರು ಸಾರಿ ಕೇಳಿ ಶ್ರೀಸೂಕ್ತಳ ಪ್ರಾಣಹರಣ ಮಾಡಿಬಿಟ್ಟಿದ್ದೆ. ಅವಳಲ್ಲಿ ಉತ್ತರವಿರಲಿಲ್ಲವೆಂದೆನಿಲ್ಲ ಹೇಳುವುದಕ್ಕೆ ಯಾವುದೋ ತಡೆ ಅವಳಿಗೆ. ಮೊದಲಿನಿಂದಲೂ ಅಷ್ಟೇ, ನಾ ಕೇಳುವ ಪ್ರಶ್ನೆಗಳಿಗೆ ಸೂಕ್ತಳದು ಒಂದು ಮುಗುಳ್ನಗು ಮಾತ್ರ ಉತ್ತರ. ನಾ ಪ್ರಶ್ನೆ ಮರೆತ ದಿನ ಅವಳ ನಿಜವಾದ ಉತ್ತರ ಎದುರಾಗುತ್ತಿತ್ತು. ಸೂಕ್ತ ನನ್ನ ಬಾಲ್ಯದ ಗೆಳತಿ (ಬಾಲವಾಡಿ) ಅಂದಿನಿಂದಲೂ ನಿರಂತರವಾಗಿ ಸಾಗಿದೆ ನಮ್ಮ ಗೆಳೆತನ. ನಾವು ಐದನೇಯ ಕ್ಲಾಸಿನಲ್ಲಿದ್ದಾಗ ಒಮ್ಮೆ ನಮ್ಮ ಊರ ಹತ್ತಿರ ಇರುವ ಕೃಷ್ಣಮೃಗ ಅಭಯಾರಣ್ಯದ ಪ್ರವಾಸ ಕೈಗೊಂಡಿದ್ದೆವು. ಅವತ್ತು ಅವಳಿಗೆ ನಾನು ಮೊದಲ ಪ್ರಶ್ನೆ ಕೇಳಿದ್ದೆ ಸೂಕ್ತ ಪ್ರಾಣಿಗಳೆಕೆ ನಮ್ಮತರ ಮಾತಾಡಲ್ಲ. ??? ಹನ್ನೊಂದು ವರ್ಷದ ಸೂಕ್ತ ಮಾರನೇ ದಿನ ಶಾಲೆಯಲ್ಲಿ ತನ್ನ ಉತ್ತರ ಹೇಳಿದ್ದಳು. ಇಲ್ಲಾ ಅವು ಕೂಡ ಮಾತಾಡ್ತವೆ ಆದರೆ ನಮ್ಮೊಂದಿಗೆ ಮಾತಾಡಲ್ಲ ಅಷ್ಟೇ, ಅವಕ್ಕೆ ಮನುಷ್ಯರ ಮೇಲೆ ನಂಬಿಕೆ ಇಲ್ಲ. ಅವುಗಳ ಮಾತು ನಮಗೆ ಯಾಕೆ ಅರ್ಥ ಆಗಲ್ಲ ಅಂದ್ರೆ. ನಾವು ಅವುಗಳಷ್ಟು ತಿಳಿಮನಸ್ಸಿನವರಲ್ಲ. ಆವಾಗ ಅವಳೇನ ಹೇಳಿದ್ಲೊ, ನನಗೆನ ಅರ್ಥ ಆಗಿತ್ತೊ ಆ ದೇವರಿಗೆ ಗೊತ್ತು. ಅವಾಗ ನನಗೆ ತಿಳಿಯುತ್ತಿದ್ದು ಒಂದೇ ಸೂಕ್ತ ಈ ಜಗತ್ತಿನಲ್ಲಿರೊ ಎಲ್ಲ ಹುಡುಗಿಯರಿಗಿಂತ ಬುದ್ಧಿವಂತೆ!!! ನಾನಿ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ ಅವರ ತಂದೆ ನಮ್ಮ ಶಾಲೆಯಲ್ಲಿ ವಿಜ್ಞಾನದ ಮಾಸ್ತರ್. ಅವಳು ಬುದ್ಧಿವಂತೆ ಅಂತ ನಿರ್ಧರಿಸೊದಕ್ಕೆ ಇದಕ್ಕಿಂತ ಮಾನದಂಡ ಬೇಕೆ?? ಮುಂದೆ ಏಳನೇಯ ಕ್ಲಾಸಿಗೆ ಬಂದಾಗ ಅವಳ ತಾಯಿ ಮಗಳ ದೊಡ್ಡವಳಾದಳು ಎಂದು ನಮ್ಮ ಶಾಲೆಯಿಂದ ಸುಮಾರು ದೂರವಿದ್ದ ಹೆಣ್ಣುಮಕ್ಕಳ ಶಾಲೆಗೆ ಸಾಗ ಹಾಕಿದ್ದರು. ಮೂರು ಸುಧೀರ್ಘ ವರ್ಷಗಳನ್ನ ನಾವು ಬೇರೆ ಬೇರೆ ಶಾಲೆಯಲ್ಲಿದ್ದೆ ಕಳೆದೆವು. ಅದು ಅಷ್ಟಾಗಿ ಕಂಡು ಬರಲಿಲ್ಲ. ದಿನಾ ಸಂಜೆ ಅವರ ಮನೆಗೆ ಪಾಠಕ್ಕೆ ಹೋಗತಿದ್ದೆ ಅಲ್ವಾ , ಆಗ ನನ್ನ ತಲೆಬುಡವಿಲ್ಲದ ಪ್ರಶ್ನೆಗಳನ್ನ ಅವಳಿಗೆ ಕೇಳಿ ನಾನು ಸಮಾಧಾನವಾಗುತ್ತಿದ್ದೆ. ಅವರ ಅಮ್ಮ ಆಗಾಗ ತಮಾಷೆ ಮಾಡುತ್ತಿದ್ದರು ನಮ್ಮ ಸೂಕ್ತ ಇಲ್ಲಾಂದ್ರ ಇವಂಗ ಕೂಳ ಸೇರಂಗಿಲ್ಲ ಅನ್ಸತೆತಿ ನೋಡ್ರಿ ಅಂತ. ನಂತರದ ದಿನಗಳಲ್ಲಿ ಸೂಕ್ತ ಬರಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವ ಗೆಳತಿಯಾಗಿರಲಿಲ್ಲ. ಮುಂದೆ ನಾವು ಮೆಟ್ರಿಕ ಪಾಸಾದ ಮೇಲೆ ಮುಂದಿನ ಓದಿಗೆ ಯಾವ ಕಾಲೇಜಿಗೆ ಹೋಗಬೇಕು, ಯಾವ ವಿಷಯ ಅಯ್ದುಕೊಳ್ಳಬೇಕು, ನಾನ ಬಟ್ಟೆ ತೊಡಬೇಕು ಹೀಗೆ ಎಲ್ಲ ವಿಷಯಗಳಲ್ಲೂ ಅವಳದೆ ಕಡೆಯ ನಿರ್ದಾರವಾಗಿರುತ್ತಿತ್ತು. ನಮಗೆ ಬೇರೆ ಗೆಳೆಯರು ಇರಲಿಲ್ಲ ವೆಂದೆನಿಲ್ಲ ಇದ್ರು ಆದರೆ ಅದರೆ ನಮ್ಮಿಬ್ಬರ ವೈಯಕ್ತಿತ ಜಗತ್ತಿನಲ್ಲಿ ಯಾರಿಗೂ ಪ್ರವೇಶವಿರಲಿಲ್ಲ. ಮುಂದೆ ನಾನು ಓದಲಿಕ್ಕೆ ಆಗದೆ ಬದುಕಿನ ಗಿರಣಿಗೆ ಬಿದ್ದೆ, ಅವಳು ಎಸ್ ಸಿ ಕಂಪ್ಯೂಟರ್ ಸೈನ್ಸ ಮಾಡಿ ಮುಂದೆ ಮತ್ತೆ ಓದುತ್ತೆನೆ ಎಂದು ಹಾಗೆ ಸಾಗಿದಳು.

ಸರಿಯಾಗಿ ಅದೇ ಸಮಯದಲ್ಲಿ ನಾನು ನನ್ನ ವಯಸ್ಸಿನ ಹುಡುಗರು ಮಾಡುವ ಘನಕಾರ್ಯ ಮಾಡಿ ಒದ್ದಾಡುತ್ತಿದೆ. ಅವತ್ತು ಸೂಕ್ತ ಹೇಳಿದ ಮಾತು ಇನ್ನೂ ನನ್ನ ಹೃದಯದಲ್ಲಿದೆ ನಾನು ಎಡುವುವಾಗ ಆ ಮಾತುಗಳು ಮತ್ತೆ ಮತ್ತೆ ನೆನಪಿಗೆ ಲಗ್ಗೆ ಇಡುತ್ತವೆ.
ಅವತ್ತು ಮೊದಲ ಬಾರಿ ಬಾಟಲಿಯ ತುದಿಗೆ ತುಟಿ ಹಚ್ಚಿ ಮನೆಗೆ ಬಂದಿದ್ದೆ. ನನ್ನ ಮನೆಗೂ ಸೂಕ್ತಳ ಮನೆಗೂ ಎಷ್ಟು ದೂರ, ಏನೊ ವಿಷಯಕ್ಕೆ ಅಂತ ಬಂದವಳು ನನ್ನ ಅವಸ್ಥೆ ನೋಡಿ ಅವತ್ತು ಮಾತನಾಡಿದ್ದಳು. ನೋಡು ಪ್ರೀತಿ ಮಾಡುವಾಗ ಯಾರು ಕರಾರು ಮಾಡಿಕೊಂಡಿರುವುದಿಲ್ಲೊ, ಸತ್ತ ಮೇಲೂ ಜೊತೆಗಿರ್ತಿವಿ ಅಂತ. ನೀನ ಅವಳನ್ನ ಎಷ್ಟೇ ಪ್ರೀತಿಸಿರಬಹುದು ಅವಳೂ ಕೂಡ. ಆದರೆ ಅದೇ ಕಾರಣ ಇಟ್ಕೋಂಡು ನೀನ ಈ ರೀತಿ ಆಡೋದು ತಪ್ಪು. ಅಷ್ಟಕ್ಕೂ ಅವಳು ಮೋಸ ಮಾಡಿದ್ಲು ಅಂತ ತಾನೆ ನಿನ್ನ ಭಾವನೆ. ಹಾಗಾದ್ರೆ ಹೌದು ಮೋಸ ಮಾಡಿದ್ಲು ಏನಿಗ. ನೀನು ಮಾಡು ಬೇಡ ಅಂದೊರ್ ಯಾರು. ನಾನ ಹೀಗ ಹೇಳ್ತಿನಿ ಅಂತ ಬೇಜಾರಾಗಬೇಡ, ಆಮೇಲೆ ನಿನಗೆ ಹೇಳೊ ಎಲ್ಲಾ ಹಕ್ಕು ನನಗಿದೆ. ಅವಳು ಬರೊದಕ್ಕಿಂತ ಮುಂಚೆ ನಿನಗೆ ನಿನ್ನ ಜೀವನಾ ಇರ್ಲೇ ಇಲ್ವಾ?? ನಾನ್ ನಿನ್ನ ತಂದೆ ತಾಯಿ ವಿಷಯ ಕೂಡಾ ಹೇಳ್ತಿಲ್ಲ. ನಿನಗೆ ನಿನ್ನದೇ ಆದ ಜೀವನ ಇತ್ತೋ ಇಲ್ವೋ, ಅವಳು ಬಂದ್ಲು ಹೋದ್ಲು ಅಷ್ಟೇ. ನೋಡು ಒಂದು ಹುಡುಗಿಯಿಂದ ನೀನ ಯಾವತ್ತು ಜಾಸ್ತಿ ನಿರೀಕ್ಷೆ ಮಾಡಬೇಡ ಅವಳು ಕೊಡೊದ್ರಲ್ಲಿ ಕಾಮಧೇನುವಾದ್ರೆ. ಕಳೆಯೊದ್ರಲ್ಲಿ ಮೇನಕೆ, ನನ್ನ ಮಾತಿನ ಅರ್ಥ ಇಷ್ಟೇ ಒಂದು ಹೆಣ್ಣು ನಿಯತ್ತು ಅಂತ ತೋರಿಸಿದ್ರೆ ಗಂಡು ಆ ನಿಯತ್ತಿಗೆ ಕಕ್ಕಾಬಿಕ್ಕಿಯಾಗುತ್ತಾನೆ. ಅದೇ ಹೆಣ್ಣು ಚಂಚಲೆಯಾಗಿದ್ರೆ ಕಡೆಯವರೆಗೂ ಅವಳ ಮೋಸ ನಿಂಗ ಅರ್ಥ ಆಗಲ್ಲ. ನಿನ್ನ ಮೇಲೆ ಅವಳಿಗೆ ನಿಯತ್ತಿತ್ತು ಅದಕ್ಕೆ ನಿನಗೆ ಹೇಳಿ ಹೋಗಿದಾಳೆ. ನಿಜವಾಗ್ಲೂ ಸಂತೋಷ ಪಡಬೇಕು ನೀನು. ಕೆಲವೊಬ್ರು ಕಾರಣ ಇಲ್ದೇ ಹೊರಟ್ ಹೋಗ್ತಾರೆ. ನೀನ ಕೇಳ್ದೇನೆ ಇರೋ ಪ್ರಶ್ನೆಗೆ ನನ್ನ ಉತ್ತರ ಇದು.
ಸೂಕ್ತ ಮುಂದುವರೆದು ಹೀಗಂದಳು ನಾವಿಬ್ರೂ ಗೆಳೆಯರಾಗಿ ಸುಮಾರು ೨೩ ವರ್ಷ ಆಯ್ತು ಪ್ರಶ್ನೆಗಳು ಬರೀ ನಿನ್ನವೇ ಆದ್ವು ಇವತ್ತು ನಾನ್ ನಿನಗೊಂದು ಪ್ರಶ್ನೆ ಕೇಳ್ತಿನಿ ಉತ್ತರ ಹೇಳ್ತಿಯಾ. ಏನು ಎಂಬಂತೆ ಅವಳತ್ತ ನೋಡಿದೆ. ನಾವಿಬ್ರೂ ಮದುವೆ ಯಾಕ ಆಗಬೇಕು?? ನಾ ಕುಡಿದ ಕಳ್ಳು ಒಂದೇ ಸಲಕ್ಕೆ ಇಳಿದಿತ್ತು. ಸೂಕ್ತ ಮತ್ತೆ ಕೇಳಿದ್ಲು ನಾವಿಬ್ರೂ ಮದುವೆ ಯಾಕ ಆಗಬೇಕು ?? ಅಷ್ಟೋಂದು ಸುಧಿರ್ಘ ವರ್ಷದ ಗೆಳತಿಯ ಪ್ರಶ್ನೆ ಇಷ್ಟೋಂದು ಮಧುರ ಯಾತನೆಯದಾಗಿರುತ್ತೆ ಅಂತ ಅಂದುಕೊಂಡಿರಲಿಲ್ಲ ನಾ ಅವಳು ಮತ್ತೆ ಅಂದಳು ಯಾಕೆ ಆಗಬೇಕು ಅಂತ . ಮುಂದೆ ಸೂಕ್ತ ತನ್ನ ಓದು ಮುಗಿಸಿ ಬಂದ ನೂರಾರು ಕೆಲಸಗಳನ್ನ ತಿರಸ್ಕರಿಸಿ ನಾವು ಓದಿದ ಶಾಲೆಯಲ್ಲೇ ಶಿಕ್ಷಕಿಯಾದಳು ನಾನು ಅದೇ ಊರಲ್ಲಿ ಒಬ್ಬ ಯಶಸ್ವಿ ವ್ಯಾಪಾರಿಯಾಗಿ ನೆಲೆ ನಿಂತೆ. ಅವಳು ಆ ಪ್ರಶ್ನೆ ಕೇಳಿ ಮೂರನೇ ವರ್ಷಕ್ಕೆ ನಾ ಉತ್ತರ ಕೊಟ್ಟಿದ್ದೆ ಧ್ವನಿಯ ಮೂಲಕ ( ಧ್ವನಿ ನಮ್ಮ ಮಗಳ ಹೆಸರು) ಇವಳ ಬರುವಿಕೆಗಾಗಿ ನಾವು ಮದುವೆಯಾಗಬೇಕಿತ್ತು ಅಂತ. ಸೂಕ್ತಳ ಮುಖದಲ್ಲಿ ಸಂತೃಪ್ತಿಯ ನಗುವೊಂದಿತ್ತು.
ಇನ್ನೊಂದು ವಿಷಯ ನನ್ನ ಪ್ರಶ್ನೆ ಕೇಳುವ ಚಟ ಮಾತ್ರ ಇನ್ನೂ ಹಾಗೆ ಸಾಗಿದೆ .
ನಿನ್ನೆ ನಾನು ಅವಳು ಚಿಕ್ಕದಾಗಿ ಜಗಳವಾಡಿಕೊಂಡಾಗ ಕೇಳಿದ ಪ್ರಶ್ನೆ ಇದು "ಮಾತು ಮತ್ತು ಮೌನಗಳ ನಡುವಿನ ಅತೀ ಸೂಕ್ಷ್ಮದ ಹೆಸರೇನು" ಸೂಕ್ತ ಅದೇ ಮುಗುಳ್ನಗೆಯಿಂದ ಉತ್ತರಿಸಿದ್ದಳು ಧ್ವನಿ ಇನ್ನೇನ ಶಾಲೆಯಿಂದ ಬರ್ತಾಳೆ ಅವಳನ್ನ ಕೇಳು ಬಹುಶಃ ನಿನಗೆ ಉತ್ತರ ಸಿಗಬಹುದು ಅಂತ